(Go: >> BACK << -|- >> HOME <<)

ಕರ್ನಾಟಕದ ಏಕೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೯ ನೇ ಸಾಲು:
 
==ಹುಬ್ಬಳ್ಳಿ ಗಲಭೆ==
19-4-1953ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ಕೆ.ಪಿ.ಸಿ.ಸಿ.ಯ ವಿಶೇಷ ಕಾರ್ಯಕಾರೀ ಸಮಿತಿ ಸಭೆ ನಡೆಯಲಿತ್ತು. ಇದು ಕಾಂಗ್ರೆಸ್ಸೇತರ ಪಕ್ಷÀಗಳಪಕ್ಷಗಳ ನಾಯಕರಿಗೂ ತಿಳಿದಿತ್ತು. ರಾಜೀನಾಮೆ ನೀಡುತ್ತೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಾ, ಯಾವುದೇ ರೀತಿಯ ನಿರ್ಧಾರಕ್ಕೆ ಅವಕಾಶ ನೀಡದ ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಕೇಳಲು ಜನ ಸಿದ್ಧರಾದರು. ಹಳ್ಳಿ ಹಳ್ಳಿಗಳಿಂದ ಚಕ್ಕಡಿಗಳಲ್ಲಿ ಹುಲ್ಲು ಹೇರಿಕೊಂಡು ಬಂದ ಸುಮಾರು ಇಪ್ಪತ್ತೈದು ಸಾವಿರ ಜನ ಹುಬ್ಬಳ್ಳಿಯ ಗುಳಕವ್ವನ ಕಟ್ಟೆಯಲ್ಲಿ ಜಮಾಯಿಸಿದರು. ಅದೇ ಸಂದರ್ಭದಲ್ಲಿ ಅದೇ ಮೈದಾನದಲ್ಲಿ ಒಂದು ಸರ್ಕಸ್ ಕಂಪೆನಿ ಸಹ ಪ್ರದರ್ಶನ ನಡೆಸಿತ್ತು. ಬಹುತೇಕ ಕರ್ನಾಟಕದ ಎಲ್ಲ ಭಾಗಗಳ ಜನ ಅಲ್ಲಿ ಸೇರಿದ್ದರು. ಪುರಭವನಕ್ಕೆ ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದಂತೆಯೇ ಜನರು ಧಿಕ್ಕಾರ ಹೇಳುತ್ತಾ ಸ್ವಾಗತಿಸುತ್ತಿದ್ದರು. ಸಭೆ ನಡೆಯುತ್ತಿದ್ದ ಸ್ತಳಕ್ಕೆ ಹೋದ ಕೆಲವರು ಕಾಂಗ್ರೆಸ್ ನಾಯಕರಿಗೆ ಅರಿಶಿನ-ಕುಂಕುಮ ಹಚ್ಚಿ, ಬಳೆ ತೊಡಿಸಿದರು. ಹಳ್ಳಿಕೇರಿ ಗುದ್ಲೆಪ್ಪನವರ ಜೀಪಿಗೆ ಯಾರೋ ಬೆಂಕಿ ಹಚ್ಚಿದರು. ಜನರನ್ನು ನಿಯಂತ್ರಿಸುವುದು ಕಷ್ಟ ಎಂದು ತಿಳಿದ ಪೋಲೀಸರು ಲಾಠೀಛಾರ್ಜ್ ಗೆ ಆಜ್ಞೆ ಮಾಡಿದರು. ಅದಕ್ಕೆ ಬೆದರದ ಜನ ಲಾಠಿಗಳಿಗೆ ಎದೆಯೊಡ್ಡಿ ನಿಂತರು. ಲಾಠೀಛಾರ್ಜ್ ಪರಿಣಾಮಕಾರಿ ಆಗಲಿಲ್ಲ ಎಂದು ಪೋಲೀಸರು ಗೋಲೀಬಾರ್ ಗೆ ಆದೇಶ ನೀಡಿದರು. ಜನರು ಅದಕ್ಕೂ ಎದೆಯೊಡ್ಡಿ ನಿಂತರು. ಈ ಎಲ್ಲ ವಿಷಯಗಳನ್ನು ಸ್ಥಳೀಯ ಪತ್ರಿಕೆಗಳಲ್ಲದೆ ನ್ಯೂಯಾರ್ಕ್ ಟೈಂಸ್ ಪತ್ರಿಕೆಯು ಮುಖ ಪುಟದಲ್ಲೇ ವರದಿ ಮಾಡಿತು. ಆ ಗಲಭೆಯಲ್ಲಿ ಕೆಲವರನ್ನು ಬಂಧಿಸಿ, ವಿಚಾರಣೆಗೆ ಗುರಿ ಪಡಿಸಲಾಯಿತು. ಬಂಧಿತರಾಗಿದ್ದವರ ಪರವಾಗಿ ಎಸ್.ಆರ್.ಬೊಮ್ಮಾಯಿ ಅವರು ವಾದಿಸಿದರು. ಹುಬ್ಬಳ್ಳಿಯಲ್ಲಿ ಒಂದೆಡೆ ಗಲಭೆ ಆದರೆ, ಮತ್ತೊಂದೆಡೆ ಕೆ.ಪಿ.ಸಿ.ಸಿ. ಸಭೆ ನಡೆದು ಗದ್ದಲದ ನಡುವೆಯೇ ಕರ್ನಾಟಕ ಏಕೀಕರಣದ ಪರವಾಗಿ ನಿರ್ಣಯವನ್ನು ಸ್ವೀಕರಿಸಲಾಯಿತು. ಹುಬ್ಬಳ್ಳಿಯ ಗಲಭೆಯ ನಂತರ ಕರ್ನಾಟಕದ ಕಾಂಗ್ರೆಸ್ ನಾಯಕರು ಪ್ರಧಾನ ಮಂತ್ರಿ ನೆಹರೂ ಅವರನ್ನು ಏಕೀಕರಣಕ್ಕೆ ಒತ್ತಾಯಿಸತೊಡಗಿದರು. ಕಾಂಗ್ರೆಸ್ಸೇತರ ಪಕ್ಷಗಳ ಕೆಲವು ನಾಯಕರು ರಾಜ್ಯ ನಿರ್ಮಾಣವನ್ನೇ ಪ್ರಮುಖ ಗುರಿಯಾಗಿಟ್ಟುಕೊಂಡು ರೂಪಿಸಿದ ಸಂಸ್ಥೆಯೇ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು.
 
==ಮಿಶ್ರಾ ಸಮಿತಿ==
"https://kn.wikipedia.org/wiki/ಕರ್ನಾಟಕದ_ಏಕೀಕರಣ" ಇಂದ ಪಡೆಯಲ್ಪಟ್ಟಿದೆ