(Go: >> BACK << -|- >> HOME <<)

ಹಕ್ಕುಸ್ವಾಮ್ಯ ಎಂದರೇನು?

ಯಾವ ಪ್ರಕಾರದ ಕಾರ್ಯಗಳು ಹಕ್ಕುಸ್ವಾಮ್ಯಕ್ಕೆ ವಿಷಯವಾಗಿದೆ?

ಭೌತಿಕ ಮಾಧ್ಯಮದಲ್ಲಿ ಉಳಿಸಿರುವಂತಹ ಮೂಲ ಕೃತಿಯೊಂದನ್ನು ವ್ಯಕ್ತಿಯೊಬ್ಬ ರಚಿಸಿದಾಗ, ಆ ಕೃತಿಗೆ ಸಂಬಂಧಿಸಿದಂತೆ ಅವನು ಅಥವಾ ಅವಳು ಹಕ್ಕುಸ್ವಾಮ್ಯ ಹೊಂದುತ್ತಾರೆ. ಆ ಕೃತಿಯನ್ನು ಕೆಲವು, ನಿರ್ದಿಷ್ಟ ವಿಧಾನಗಳಲ್ಲಿ ಬಳಸುವಂತಹ ವಿಶೇಷ ಹಕ್ಕನ್ನು ಮಾಲೀಕರಿಗೆ ಹಕ್ಕುಸ್ವಾಮ್ಯ ಮಾಲೀಕತ್ವವು ಒದಗಿಸುತ್ತದೆ. ಇವುಗಳನ್ನು ಒಳಗೊಂಡಂತೆ ಹಕ್ಕುಸ್ವಾಮ್ಯಕ್ಕೆ ಹಲವಾರು ಪ್ರಕಾರದ ಕೃತಿಗಳು ಲಭ್ಯವಿವೆ:

  1. TV ಕಾರ್ಯಕ್ರಮಗಳು, ಚಲನಚಿತ್ರಗಳು, ಮತ್ತು ಆನ್‌ಲೈನ್ ವೀಡಿಯೊಗಳಂತಹ ಶ್ರವಣದೃಶ್ಯ ಕೃತಿಗಳು
  2. ಧ್ವನಿ ರೆಕಾರ್ಡಿಂಗ್‌ಗಳು ಮತ್ತು ಸಂಗೀತ ರಚನೆಗಳು
  3. ಉಪನ್ಯಾಸಗಳು, ಲೇಖನಗಳು, ಪುಸ್ತಕಗಳು, ಮತ್ತು ಸಂಗೀತ ರಚನೆಗಳಂತಹ ಲಿಖಿತ ಕೃತಿಗಳು
  4. ಚಿತ್ರಕಲೆಗಳು, ಭಿತ್ತಿಪತ್ರಗಳು, ಮತ್ತು ಜಾಹೀರಾತುಗಳಂತಹ ದೃಶ್ಯ ಕೃತಿಗಳು
  5. ವೀಡಿಯೊ ಗೇಮ್ಸ್ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್
  6. ನಾಟಕಗಳು ಮತ್ತು ಸಂಗೀತಗಳಂತಹ ನಾಟಕ ಕೃತಿಗಳು

ವಿಚಾರಗಳು, ಘಟನೆಗಳು, ಮತ್ತು ಪ್ರಕ್ರಿಯೆಗಳು ಹಕ್ಕುಸ್ವಾಮ್ಯಕ್ಕೆ ಒಳಪಡುವುದಿಲ್ಲ. ಹಕ್ಕುಸ್ವಾಮ್ಯಕ್ಕೆ ಅರ್ಹವಾಗಿರಲು, ಸ್ಪಷ್ಟ ಮಾಧ್ಯಮದಲ್ಲಿ ಕಾರ್ಯವು ಸೃಜನಾತ್ಮಕವಾಗಿರಬೇಕು ಮತ್ತು ನಿಶ್ಚಿತವಾಗಿರಬೇಕು. ಹೆಸರುಗಳು ಮತ್ತು ಶೀರ್ಷಿಕೆಗಳು ಹಕ್ಕುಸ್ವಾಮ್ಯ ಸಂರಕ್ಷಣೆ ವ್ಯಾಪ್ತಿಗೆ ಬರುವುದಿಲ್ಲ.

ಉಲ್ಲಂಘಿಸದೆಯೇ ಹಕ್ಕುಸ್ವಾಮ್ಯ-ಸಂರಕ್ಷಿತ ಕಾರ್ಯವನ್ನು ಬಳಸಲು ಸಾಧ್ಯವೇ?

ಕೆಲವೊಂದು ಸಂದರ್ಭಗಳಲ್ಲಿ, ಮಾಲೀಕರ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸದೆಯೇ ಹಕ್ಕುಸ್ವಾಮ್ಯಕ್ಕೊಳಗಾದ ಕೃತಿಗಳನ್ನು ಬಳಸು ಸಾಧ್ಯವಿದೆ. ಇದರ ಕುರಿತು ಇನ್ನಷ್ಟು ಸಂಗತಿಗಳನ್ನು ತಿಳಿದುಕೊಳ್ಳಲು, ನ್ಯಾಯಯುತ ಬಳಕೆಯ ಕುರಿತು ತಿಳಿದುಕೊಳ್ಳಲು ನೀವು ಬಯಸಬಹುದು. ಹಕ್ಕುಸ್ವಾಮ್ಯ ಉಲ್ಲಂಘನೆಯ ಹಕ್ಕಿನ ಮೂಲಕ ನಿಮ್ಮ ವೀಡಿಯೊವು ಇನ್ನೂ ಪರಿಣಾಮ ಬೀರಬಹುದು ಎಂಬುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ, ನೀವು ಹೊಂದಿದ್ದರೂ...

  1. ಹಕ್ಕುಸ್ವಾಮ್ಯ ಮಾಲೀಕನಿಗೆ ನೀಡಿರುವ ಕ್ರೆಡಿಟ್
  2. ಉಲ್ಲಂಘಿಸುತ್ತಿರುವ ವೀಡಿಯೊದ ಹಣಗಳಿಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ
  3. YouTube ನಲ್ಲಿ ಗೋಚರಿಸುವ ಸಮಾನ ರೀತಿಯ ವೀಡಿಯೊಗಳನ್ನು ಪರಿಶೀಲಿಸಲಾಗಿದೆ
  4. iTunes, CD, ಅಥವಾ DVD ಯಲ್ಲಿನ ವಿಷಯವನ್ನು ಖರೀದಿಸಲಾಗಿದೆ
  5. TV, ಚಲನಚಿತ್ರ ಥಿಯೇಟರ್, ಅಥವಾ ರೇಡಿಯೊದಿಂದ ನಿಮ್ಮಷ್ಟಕ್ಕೆ ವಿಷಯವನ್ನು ರೆಕಾರ್ಡ್ ಮಾಡಲಾಗಿದೆ
  6. ''ಹಕ್ಕುಸ್ವಾಮ್ಯ ಉಲ್ಲಂಘನೆ ಉದ್ದೇಶಿಸಲಾಗಿಲ್ಲವೆಂದು'' ಹೇಳಲಾಗಿದೆ

ಕೆಲವು ಮಾರ್ಪಾಡುಗಳ ಜೊತೆ ಮರುಬಳಕೆಗೆ ಅನುಕೂಲವಾಗುವ ರೀತಿಯಲ್ಲಿ ತಮ್ಮ ಕೃತಿಯು ಲಭ್ಯವಿರುವಂತೆ ರಚನೆಕಾರರು ಕೆಲವು ವಿಷಯವನ್ನು ಆಯ್ಕೆ ಮಾಡುತ್ತಾರೆ. ಇದರ ಕುರಿತು ಇನ್ನಷ್ಟಕ್ಕಾಗಿ, ಕ್ರಿಯೇಟೀವ್ ಕಾಮನ್ಸ್ ಕುರಿತು ತಿಳಿದುಕೊಳ್ಳಲು ನೀವು ಬಯಸಬಹುದು.

ಹಕ್ಕುಸ್ವಾಮ್ಯ ಮಾಲೀಕತ್ವವನ್ನು YouTube ನಿರ್ಧರಿಸಬಹುದೇ?

ಇಲ್ಲ. ಹಕ್ಕುಗಳ ಮಾಲೀಕತ್ವ ವಿವಾದಗಳ ಮಧ್ಯಸ್ಥಿಕೆ ನಡೆಸಲು YouTube ಗೆ ಸಾಧ್ಯವಿಲ್ಲ. ನಾವು ಸಂಪೂರ್ಣ ಟೇಕ್‌ಡೌನ್‌ ಅಧಿಸೂಚನೆಯನ್ನು ಸ್ವೀಕರಿಸಿದಾಗ ಕಾನೂನಿನನ್ವಯ ವಿಷಯವನ್ನು ನಾವು ತೆಗೆದುಹಾಕುತ್ತೇವೆ. ಮಾನ್ಯ ಪ್ರತಿ ಅಧಿಸೂಚನೆಯನ್ನು ನಾವು ಸ್ವೀಕರಿಸಿದಾಗ ತೆಗೆದುಹಾಕುವಿಕೆಯನ್ನು ಯಾರು ವಿನಂತಿಸಿದ್ದಾರೋ ಆ ವ್ಯಕ್ತಿಗೆ ಅದನ್ನು ನಾವು ಫಾರ್ವರ್ಡ್ ಮಾಡುತ್ತೇವೆ. ಇದರ ನಂತರ, ನ್ಯಾಯಾಲದಲ್ಲಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಆ ವ್ಯಕ್ತಿಗೆ ಬಿಟ್ಟಿದ್ದು.

ವಿಷಯವು YouTube ಗೆ ಅಪ್‌ಲೋಡ್ ಆದಾಗ ಅದನ್ನು ಸ್ವಯಂಚಾಲಿತವಾಗಿ ಗುರುತಿಸಲು ಬಯಸುವ ವಿಷಯ ಮಾಲೀಕರಿಗೆ ವಿಷಯ IDಯನ್ನು ನಾವು ಒದಗಿಸುತ್ತೇವೆ, ಮತ್ತು ನಿಖರವಾಗಿಲ್ಲದ ಹೊಂದಿಕೆಗಳ ಕುರಿತು ದೂರು ನೀಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತೇವೆ.

ಹಕ್ಕುಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್‌‌ನ ನಡುವೆ ಇರುವ ವ್ಯತ್ಯಾಸವೇನು? ಪೇಟೆಂಟ್‌ಗಳ ಕುರಿತೇನು?

ಹಕ್ಕುಸ್ವಾಮ್ಯವೆಂಬುದು ಬೌದ್ಧಿಕ ಸ್ವತ್ತಿನ ಒಂದು ಸ್ವರೂಪವಾಗಿದೆ. ಇದು, ಬ್ರಾಂಡ್ ಹೆಸರುಗಳು, ಧ್ಯೇಯಗಳು, ಲೋಗೋಗಳನ್ನು ರಕ್ಷಿಸುವ ಟ್ರೇಡ್‌ ಮಾರ್ಕ್‌ನಂತಲ್ಲ. ಹಾಗೂ, ಇನ್ಯಾವುದೋ ಕಾರಣಕ್ಕಾಗಿ ಇತರರು ಬಳಸುವ ಇತರ ಮೂಲ ಗುರುತಿಸುವಿಕೆಗಳಂತೆಯೂ ಅಲ್ಲ. ವಿಶೇಷವಾಗಿ ಸಂಶೋಧನೆಗಳಿಗೆ ರಕ್ಷಣೆ ನೀಡುವ ಪೇಟೆಂಟ್ ಕಾನೂನಿಗಿಂತಲೂ ಇದು ಭಿನ್ನವಾಗಿದೆ. ಟ್ರೇಡ್‌ಮಾರ್ಕ್, ವ್ಯಾಪಾರ ರಹಸ್ಯ, ಅಥವಾ ಇತರ ಕಾನೂನುಗಳನ್ನು ಉಲ್ಲಂಘಿಸುವ, ವೀಡಿಯೊಗಳಿಗಾಗಿ ಪ್ರತ್ಯೇಕ ತೆಗೆದುಹಾಕುವಿಕೆ ಪ್ರಕ್ರಿಯೆಯನ್ನು YouTube ಒದಗಿಸುತ್ತದೆ.

ಹಕ್ಕುಸ್ವಾಮ್ಯ ಮತ್ತು ಗೌಪ್ಯತೆಯ ನಡುವೆ ಇರುವ ವ್ಯತ್ಯಾವೇನು?

ವೀಡಿಯೊ, ಚಿತ್ರ ಅಥವಾ ಆಡಿಯೊ ರೆಕಾರ್ಡಿಂಗ್‌ನಲ್ಲಿ ನೀವು ಕಾಣಿಸಿಕೊಂಡಿರುವುದರಿಂದ ಅದರ ಹಕ್ಕುಸ್ವಾಮ್ಯವನ್ನು ನೀವು ಹೊಂದಿರುವಿರಿ ಎಂಬುದು ಅದರರ್ಥವಲ್ಲ. ಉದಾಹರಣೆಗೆ, ನಿಮ್ಮ ಮತ್ತು ಅವರ ನಡುವಿನ ಸಂವಾದವನ್ನು ನಿಮ್ಮ ಸ್ನೇಹಿತೆ ಚಿತ್ರೀಕರಿಸಿದ್ದರೆ, ಅವರು ಮಾಡಿರುವ ವೀಡಿಯೊ ರೆಕಾರ್ಡಿಂಗ್‌‌ನ ಹಕ್ಕುಸ್ವಾಮ್ಯವನ್ನು ಅವರು ಹೊಂದಿರುತ್ತಾರೆ. ಮುಂಗಡವಾಗಿ ಅವರದನ್ನು ಉಳಿಸುವವರೆಗೆ ನೀವಿಬ್ಬರು ಮಾತನಾಡುತ್ತಿರುವ ಮಾತುಗಳು ವೀಡಿಯೊದಿಂದ ಪ್ರತ್ಯೇವಾಗಿ ಹಕ್ಕುಸ್ವಾಮ್ಯಕ್ಕೆ ಒಳಪಡುವುದಿಲ್ಲ.

ನಿಮ್ಮ ಸ್ನೇಹಿತರು ಅಥವಾ ಬೇರೆ ಯಾರಾದರೂ ನಿಮ್ಮ ಅನುಮತಿಯಿಲ್ಲದೆ ನಿಮಗೆ ಸಂಬಂಧಿಸಿದ ವೀಡಿಯೊ, ಚಿತ್ರ ಅಥವಾ ರೆಕಾರ್ಡಿಂಗ್ ಅನ್ನು ಅಪ್‌ಲೋಡ್ ಮಾಡಿದರೆ, ನಿಮ್ಮ ಗೌಪ್ಯತೆ ಅಥವಾ ಸುರಕ್ಷತೆಯನ್ನು ಉಲ್ಲಂಘಿಸುತ್ತಿದ್ದಾರೆಂದು ನೀವು ಭಾವಿಸಿದರೆ, ಗೌಪ್ಯತೆ ದೂರನ್ನು ಫೈಲ್ ಮಾಡಲು ನೀವು ಬಯಸಬಹುದು.